ಕನ್ನಡದಲ್ಲಿ ಬರೆದು ನನ್ನ ಮನಸಿನ ಅನಿಸಿಕೆಗಳನ್ನು ಹೊರಹಾಕುವ ಹಂಬಲ ಇತ್ತೀಚಿಗೆ ಹೆಚ್ಚಾಗಿದೆ. ನನ್ನ ಹೊಸ ಬ್ಲಾಗಿನಲ್ಲಿರುವ ತಾಂತ್ರಿಕ ದೋಷದ ಕಾರಣ ಕನ್ನಡ ಲಿಪಿಯು ಅಲ್ಲಿ ಬಾರದಾಗಿದೆ. ಕಳೆದ ಹಲವು ತಿಂಗಳುಗಳಲ್ಲಿ ನಾನು ಕನ್ನಡದಲ್ಲಿ ಯಾವ ಲೇಖನಗಳನ್ನೂ ಬರೆದಿಲ್ಲ - ಈಗ ಮತ್ತೆ ಗೂಗಲ್ ಸೇವೆಯ ಮೂಲಕ ನನ್ನ ಲೇಖನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೆನೆ.
'ನಾದಮಯ' ಎಂಬ ಅಂತರ್ಜಾಲ ವಿಳಾಸವನ್ನು ಈ ನನ್ನ ಹೊಸ ಲೇಖನ ಪುಟಕ್ಕೆ ಇಟ್ಟಿರುವುದು ಯಾವ ದೊಡ್ದ ಕಾರಣಕ್ಕಾಗೂ ಅಲ್ಲ; ರಾಜ್ ಕುಮಾರ್'ರವರ ಎಲ್ಲ ಹಾಡುಗಳಲ್ಲಿ ನನಗೆ ಬಹಳ ಇಷ್ಟವಾದ ಹಾಡು ಜೀವನ ಚೈತ್ರ ಚಿತ್ರದಲ್ಲಿ ಅಣ್ಣಾವ್ರು ಹಾಡಿರುವು ಈ ಹಾಡು. ಈ ಕಾರಣವಲ್ಲದೆ, ಈಗ ನಮ್ಮ ಸಮಾಜವು ಹಲವಾರು ನಾದ - ಚರ್ಚೆ, ಗಲಭೆ, ಗೊಂದಲಗಳ ನಾದಗಳಲ್ಲಿ ಮುಳುಗಿ ಅಪ-ನಾದಮಯವಾಗಿದೆ. ನನ್ನ ಲೇಖನಗಳಲ್ಲಿ, ನಮ್ಮ ಸುತ್ತಿನ ವಿವಾದ-ವಿಚಾರಗಳನ್ನು ಇಲ್ಲಿ ಬರೆದು ನಿಮ್ಮ ಮೆದುಳನ್ನು ನನ್ನ ಪದಗಳ ನಾದದಿಂದ, ಕೆಲವು ಕ್ಷಣಗಳಿಗಾದರೂ ನಾದಮಯಗೊಳಿಸುವೆನೋ ಏನೋ ಎಂಬ ಒಂದು ಸಣ್ಣದಾದ ಆಸೆಯೂ ಹೌದು.
ಈ ನನ್ನ ಅಂತರ್ಜಾಲ ಪುಟದ ಶೀರ್ಷಿಕೆ "ಕಂಪಾದ ಕೆಂಪು ಕನ್ನಡ" ಎಂದು ಕರೆದಿದ್ದೇನೆ. ಇದು ಏಕೆ ಎಂಬುದು ಮುಂದಿನ ನನ್ನ ಲೇಖನಗಳನ್ನು ನೀವು ಓದಿ ತಿಳಿದುಕೊಳ್ಳಬಹುದು :)
ರಾಜ್ಯೊತ್ಸವದ ತಿಂಗಳಲ್ಲಿ ನಾನು ಕನ್ನಡದಲ್ಲಿ ಮತ್ತೆ, ಹೆಚ್ಚಾಗಿ ಬರೆಯುವೆನೆಂದು ಪಣ ತೊಟ್ಟಿದ್ದೇನೆ - ಎಷ್ಟುವರೆಗು ಇದನ್ನು ಕಾಪಾಡುವೆನು ಎಂದು ಕಾದು ನೋಡೋಣ. ಅಲ್ಲಿವರೆಗೆ, ನನ್ನ ಸರಳ ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಕನ್ನು ನನಗೆ ತಿಳಿಸಿರಿ.
ಇಂತಿ ನಿಮ್ಮವ
ಕಂಪಾದ ಕೆಂಪು ಕನ್ನಡದ
--
ರಾಘವೇಂದ್ರ